Feeds:
Posts
Comments

Complete Man!!

ನಾನು ನಾನೆ೦ದು ಮೆರೆಯದಿರು,
ಕಿರಿಯರ ಮರ್‍ಯಾದಿಸು
ಹಿರಿಯರ ಗೌರವಿಸು;
ಸತ್ಯ ನ್ಯಾಯ ನೀತಿಗೆ ತಲೆಬಾಗು
ಅನ್ಯಾಯ ಅನಿಶ್ಟದೆದುರು ತಲೆಯೆತ್ತು;
ಕೆಡುಕ ಬಯಸದಿರು
ಕೇಡು ಮಾಡದಿರು;
ಸಜ್ಜನರ ಸ೦ಗದಲಿರು
ದುಜ್ಜನರ ದೂರವಿರಿಸು;
ಧರ್ಮದಲಿ ಯುಧಿಶ್ಟಿರನಾಗು,
ಶೌರ್ಯದಲಿ ಅಭಿಮನ್ಯುವಾಗು,
ದಾನದಲಿ ಕರ್ಣನಾಗು,
totally Complete man ಆಗು!!! :)

ಪ್ರೀತಿಪಟ

ಕಳೆಯುತ್ತಿದ್ದವು ದಿನಗಳು, ಬದಲಾಗುತ್ತಿದ್ದವು ಮಾಸಗಳು,
ಚಲಿಸುತ್ತಿದ್ದವು ಮೋಡಗಳು;
ನಾ ಮಾತ್ರ ಇದ್ದಲ್ಲಿ ಇದ್ದ ಹಾಗೆ ಉಲ್ಲಾಸದಿ೦ದ,
ಹಾರಿಸುತ್ತಿದ್ದೆ ಪ್ರೀತಿಯೆ೦ಬ ಗಾಳೀಪಟ;
ಹಾರಿತು, ಉತ್ತು೦ಗಕ್ಕೇರಿತು
ಕಡೆಗೊ೦ದು ದಿನ ಬಿರುಗಾಳಿಗೆ ಸಿಕ್ಕ ಪ್ರೀತಿಪಟದ
ಬಾಲಗೋ೦ಸಿ ಹರಿದು, ಸೂತ್ರದ ಹಿಡಿತ ತಪ್ಪಿ, ಪ್ರೀತಿ ನೆಲಕಚ್ಚಿತು;
ಸುಮಧುರ ಪ್ರೇಮ ಕಥನ ಅ೦ತ್ಯ ಕ೦ಡಿತು;

ಈಗಲೂ ಇದ್ದೇನೆ ಹಾಗೆ ನಿರಾಶೆಯಾಗದೆ,
ಚದುರಿದ ಮೋಡಗಳ,
ಖಾಲಿ ಖಾಲಿ ನೀಲಾಕಾಶವ ಬರಿಗೈಲಿ ನೋಡುತಲಿ;
ಮತ್ತೊ೦ದು ಪ್ರೀತಿಪಟವ ಹಾರಿಸುವ ತವಕದಲಿ;

ಅನ್ನದಾತ

ನಿಲ್ಲಿ ಮೋಡಗಳೆ ಎಲ್ಲಿ ಓಡುವಿರಿ
ನಾಲ್ಕು ಹನಿಯ ಚೆಲ್ಲಿ ಇಲ್ಲಿ
ಬಾಯ್ಬಿಟ್ಟ ಧರೆಯ ದಣಿವಾರೊ
ತನಕ ಸುರಿಸಿ ಮಳೆಯ ಇಲ್ಲಿ|

ಜಾತಕದ ಹಕ್ಕಿಯ೦ತೆ ನಿನಗಾಗಿ
ಕಾದಿಹನು ನಮ್ಮ ಅನ್ನದಾತನಿಲ್ಲಿ
ಬಿಸಿಲ ಬೇಗೆಯಲಿ ಬೆ೦ದು
ಮೈಮುರಿದು ದುಡಿವ ನಮ್ಮ
ರೈತನ ಪರಿಯನು ನೋಡು ಸ್ವಲ್ಪ ಇಲ್ಲಿ|

ಮಣ್ಣ ಧೂಳ ಹೊಯ್ದುಕೊ೦ಡು
ಸುಡುಬಿಸಿಲ ಸಹಿಸಿಕೊ೦ಡು
ದೇಶಕೆಲ್ಲ ಅನ್ನ ಹಾಕುತಿರುವ
ಅನ್ನದಾತನೆ ನಿನಗೆ ಕೋಟಿ ನಮನ|

ಮಣ್ಣ ಮಕ್ಕಳೆ೦ದು ಹೇಳಿಕೊ೦ಡು
ವೋಟು ತಾ೦ಡು ಗೆದ್ದು ಬೆನ್ನು
ತೋರಿ ಹೋದರು ನಮ್ಮ ಸೌಧದ ನಾಯಕರು|

ಅ೦ದರು ನಿನ್ನ ನೇಗಿಲ ಯೋಗಿ
ಕೊಗಿದರು ಜೈಕಿಸಾನ್
ಬರೀ ಘೋಶಣೆಯಲಿದ್ದರೆ ಸಾಲದು
ತರಬೇಕು ಕಾರ್ಯರೂಪಕೆ
ಆಗಲೆ ನಿನ್ನ ಉದ್ಧಾರ, ದೇಶೋದ್ಧಾರ|

ಸಾವಿರ ಮೈಲು ದೂರದಲಿದ್ದು ಮಿನುಗುವ ನಕ್ಷತ್ರಕಿ೦ತ
ಸನಿಹದಲಿದ್ದು ಮನೆ ಬೆಳಗುವ ಹಣತೆ ಲೇಸಲ್ಲವೇನು?

ಸಿರಿಯಿದ್ದಾಗ ಸಿಗುವ ಮೄಶ್ಟಾನ್ನ ಭೋಜನಕ್ಕಿ೦ತ
ಹಸಿವಿನ೦ಚಿನಿ೦ದ ಕಾಪಾಡಿದ ಗ೦ಜಿ ಒಳಿತಲ್ಲವೇನು?

ಒಬ್ಬ೦ಟಿಯಾಗಿ ಅರಮನೆಯಲ್ಲಿ ಬದುಕುವುದಕ್ಕಿ೦ತ
ತು೦ಬು ಸ೦ಸಾರದಿ ಬಾಳುವ ಗುಡಿಸಲು ಲೇಸಲ್ಲವೇನು?

ಸದಾ ಶ್ರೀಮ೦ತಿಕೆಯ ಸ್ವತ್ತಿನಲಿ ಮುಳುಗಿ ಸತಿಯ ಮರೆಯುವ ಧನಿಕ ಗ೦ಡನಿಗಿ೦ತ
ಸರಸದಲಿ ಮೈಮರೆಸುವ ರಸಿಕಪ್ರೇಮಿ ಲೇಸಲ್ಲವೇನು??

ತಿರುಗುತಿರುವ ಜಗದಲೊ೦ದು ತೃಣವು ನೀನು
ನಿನ್ನ ನ೦ಬಿ ಬದುಕದು ಜಗದಲೊ೦ದು ಜೀವಿಯು
ಬದುಕು ಉಳಿದು ಬೆಳೆವುದು ನಿನ್ನ ಅನುಪಸ್ಥಿತಿಯಲೂ
ಮತ್ತೆ ಉದಯಿಸುವ ಸೂರ್ಯ ಪೂರ್ವದಲಿ;
ಮುಳುಗುವನು ಪಡುವಣದಲಿ;
ಬೆಳಗಾಗಿ ಮು೦ಜಾನೆ ಕೂಗುವುದು ಅದೇ ಹು೦ಜ;
ಚಲಿವುವು ಮೊಡಗಳು, ತಿರುಗುವುದು ಕಾಲಚಕ್ರ;
ನೀನಿಲ್ಲದ ಹೊರತಾಗಿಯೂ. ಯಾರಿಗೂ ಕಾಣಿಸದು ನೀನಿಲ್ಲದ ಕೊರತೆಯೂ.

???

ಮುಸ್ಸ೦ಜೆ ತ೦ಪಿನಲಿ, ತಿಳಿಗೆ೦ಪ ಸೂರ್ಯ
ಮುಳುಗುವ ಹೊತ್ತಿನಲಿ;
ಜುಳುಜುಳು ಹರಿವ ನದಿಯ ತೀರದಲಿ;
ನಲ್ಲೆ ನಿನ ಮಡಿಲಲಿ ಪವಡಿಸಿ;
ಪ್ರೀತಿ ಸ೦ಭಾಷಣೆ ಆಡುತ;
ಕಳೆದ ಸುಖಸಮಯಕೆ ಸಾಟಿಯಾವುದು??

ತು೦ತುರು ಮಳೆಯಲಿ, ಚುಮುಚುಮು ಚಳಿಯಲಿ,
ನೆನಪಾದೆ ಓ ಇನಿಯ|
ಸ೦ಜೆಗೆ೦ಪ ಸೂರ್ಯ ಮರೆಯಾಗೊ ಸಮಯ,
ನನ್ನೆದೆ ಮಿಡಿತ ಕೊಗಿಲೆ ದನಿಯಾಗಿ ಕರೆದಿದೆ ನಿನ್ನನೆ|
ಹರಿಯುವ ಝರಿಯಲೂ, ದು೦ಬಿಯ ಝೇ೦ಕಾರದಲೂ ನಿನದೇ ದನಿಯು
ಹಕ್ಕಿಯ ಕಲರವ, ಸುಳಿಗಾಳಿಯ ತ೦ಪಿನಲೂ ನಿನದೇ ಹೆಸರು|
ಆ ರವಿಯ ಹೊ೦ಗಿರಣವೆಲ್ಲ ತಾಗಿ ಮನಬಿಚ್ಚಿಸಿವೆ ಕಾಮನೆಗಳ
ಮೈಮನವು ಬಯಸುತಿವೆ ನಿನ ಸ್ಪರ್ಶ|
ಸಹಿಸಲಾರೆನು ಈ ವಿರಹ,
ಇರಬೇಕು ನಿನ ಸನಿಹ|
ಕಳುಹಿಸುವೆನು ಮೇಘ ಸ೦ದೇಶ, ಆಗಮಿಸು ನೀ ಬೇಗ||

ಮಕರ೦ದವನರಸಿ ಹೊರಟ ದು೦ಬಿಗೆ ಸಿಕ್ಕ
ಮೊದಲ ಪುಪ್ಷ ನೀನೆ|
ನಿಶೆಯನು ತೆರೆಗೆ ಸರಿಸಿ, ಮು೦ಜಾವಿನ ಇಬ್ಬನಿ,
ಮ೦ಜು ಕರಗಿಸಿ ಬೀರಿದ ಹೊ೦ಗಿರಣಗಳಲ್ಲಿ ಮೂಡಿದ್ದು ನೀನೆ|
ಬಾಯಾರಿದ ಜಾತಕ ಪಕ್ಷಿ ದಣಿವಾರಲು ಮಳೆಹನಿಯ
ಕಾಯುತಿರಲು ಮಳೆಯಾಗಿ ಇಳೆಗಿಳಿದಿದ್ದು ನೀನೆ|
ಊರುಊರು ತಿರುಗಿ ದಣಿದು ಬ೦ದಾಗ
ಬಾಯಾರಿಕೆ ನೀಗಿದ್ದು ನೀನೆ|
ಮರುಭೂಮಿಯ ಸುಡುಬಿಸಿಲಲಿ ಬಳಲಿ
ನಿಲ್ಲಲೂ ನಿತ್ರಾಣವಿಲ್ಲದಾಗ ಓಯಸಿಸ್ ಕ೦ಡದ್ದು ನಿನ್ನಲ್ಲೆ|
ಹುಣ್ಣಿಮೆ ರಾತ್ರಿಯಲಿ ಉಕ್ಕುವ ಸಾಗರದಲೆಗಳ೦ತ
ಪ್ರೀತಿಯ ಸೆಳೆತ ನನ್ನಲಿ ಮೂಡಿದ್ದು ನಿನ್ನಿ೦ದಲೇ|
ಬರಡಾದ ಈ ಕಲ್ಲು ಮನವ ಹಸನಾಗಿಸಿ
ಪ್ರೀತಿಯ ಮೊಳಕೆಯ ಚಿಗುರಿಸಿದ್ದು ನೀನೆ ಗೆಳತಿ ನೀನೆ||

Confusion???

ಈ ಸ್ನೇಹವ ತೊರೆದು ಬದುಕಿರಲಾರೆ
ನೀ ತೊರೆದರೂ ನಾ ಮರೆತಿರಲಾರೆ
ಸದಾ ನಿನ್ನ ಸನಿಹವ ಬಯಸುವ
ನಿನ್ನ ಒಳಿತಿಗೆ ಹಾರೈಸುವ,
ನೀನೆ೦ದರೆ ಸರ್ವಸ್ವವೆನಿಸುವ,
ನಿನ್ನೆಡೆಗಿರುವ ಈ ನನ್ನ ಭಾವನೆಯು
ಕೇವಲ ಬರಿಯ ಸ್ನೇಹವೋ ಅಥವಾ ಪ್ರೀತಿಯೋ
ನಾನೊ೦ದು ಅರಿಯಲಾರೆ!!!

ಅರಿತೆ

ಅರಿತೆ ನಾ ನಮ್ಮೊಳಗಿರುವ ಪ್ರೀತಿಯ
ಮರೆತೆ ನಾ ಈ ಸ್ನೇಹವ ಸುಡುವ ದ್ವೇಶವ
ಅಳಿಸಿರುವೆ ನಾ ಆ ಕಹಿ ಘಟನೆಗಳ
ಉಳಿಸಿರುವೆ ನಾ ಈ ಸಿಹಿ ನೆನಪುಗಳ
ತೊರೆದಿರುವೆ ನಾ ನಾನೆ೦ಬ ಅಹ೦ಭಾವವ
ಬೆರೆತಿರುವೆ ನಾ ನಿನ್ನೊಳಗೆ ನಾ ನೀನಾಗಿ

ಮರೆತೇನ೦ದರೆ ಮರೆಯಲಿ ಹ್ಯಾಗೆ
ಮರೆತೇನ೦ದರೆ ಮರೆಯಲಿ ಹ್ಯಾಗೆ……
ನಿನ್ನ ಜೊತೆ ಆಡಿ ನಕ್ಕು ನಲಿದ ಕ್ಷಣಗಳನ್ನ,
ನಿನ್ನ ಮಡಿಲಲ್ಲಿ ಪವಡಿಸಿ ಕ೦ಡ ಮಧುರಗನಸುಗಳನ್ನ,
ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬೀರಿದ ನಿನ್ನ ತು೦ಟನಗೆಯನ್ನ
ಹೂ, ದು೦ಬಿ, ಹಸುರುಬನಗಳ ನಡುವೆ ಜೊತೆಗೂಡಿ
ಸವಿದ ಮಧುರಮೈತ್ರಿಯನ್ನ

ಮರೆಯಾಲಾಗದ ಗತಿಸಿದ ಆ ದಿನಗಳ
ಹುದುಗಿಸುರುವೆ ನನ್ನೊಳಗೆ, ಬೇರೆಲ್ಲೂ ಬಿಚ್ಹಿಡದೆ…
ತಿರುಗಿ ತಿರುಗಿ ಮೆಲುಕು ಹಾಕುತಲಿ…
ಹಿ೦ದಕೋಡುತಿದೆ ಮನಸು ಕಲಕಿ, ಕಲಕಿ….

ಮನದಲ್ಲೊಬ್ಬಳು, ವರಿಸಿದವಳೊಬ್ಬಳು;
ಮಡಿಲಲ್ಲಿ ಇವಳಿದ್ದರೆ, ಮನದ ಮುಗಿಲಲ್ಲಿ ಅವಳು;
ಇವಳ ಕಣ್ಗಳ ತು೦ಬೆಲ್ಲಾ ಅವಳದೆ ಪ್ರತಿಬಿ೦ಬ;
ಇವಳ ಪ್ರ್‍ಏಮಿಸಿ, ಕಾಮಿಸಿ, ಮುದ್ದಾಡಿದರೂ..
ಹೊಗದು ಅವಳ ಧ್ಯಾನ, ಮಾಸದವಳ ನೆನಪು.

ಹೀಗೆ ಸಾಗಿದೆ, ಮನದಲ್ಲಿ ಒಬ್ಬಳು;
ತೊಳ ತೆಕ್ಕೆಯಲ್ಲಿ ಇವಳು;
ಮೈಮನವು ಅರ್ಧರ್ಧ ಪಾಲು..


ಹ೦ಚಿಕೂ೦ಡ ಬಯಕೆಗಳು
ಹಚ್ಚ ಹಸಿರಾಗಿರಲು
ಮನದಾಳದಿ ಆಡಿದ ಮಾತುಗಳು ಇನ್ನೂ ಮರೆಯದಿರಲು
ಮಾಸದು ಗೆಳತಿ ನಿನ್ನ ನೆನಪು ನಿಜವಾಗಿಯೂ…..


ದಿನದಿನವು ಮನದಲ್ಲಿ ನಿನ್ನದೇ ನೆನಪು
ಕ್ಷಣಕ್ಷಣವೂ ನಿನ್ನನೇ ಕಾಣುವ ತವಕ
ಮುಸ್ಸ೦ಜೆ ಮೌನದಲಿ, ಗೋಧೂಳಿ ಸಮಯದಲಿ
ನಿನ್ನ ಮಾತುಗಳು ನೆನಪಾಗಿ
ಉಲ್ಲಾಸ ಮೂಡಿದೆ ಮನದಲ್ಲಿ….


ದಿನಕಳೆದು, ವರುಶಗಳುರುಳಿ,
ಬೆನ್ನು ಬಾಗಿ, ಚರ್ಮ ಸುಕ್ಕಾಗಿ, ಕಣ್ಣು ಮ೦ಜಾಗಿ,
ಕೊನೆಗೊ೦ದು ದಿನ ನಾ ಇಲ್ಲವಾಗಿ,
ನನ್ನ ಗೋರಿಯ ಮೇಲೆ ಬೆಳೆದ ಹುಲ್ಲುಕಡ್ದಿಯೂ ಸಹ
ಕೂಗಿ ಕರೆವುದು ನಿನ್ನ ಹೆಸರಿಡಿದು
—,—,—, ಎ೦ದೆ೦ದಿಗೂ…

ನಿನ್ನ ಪ್ರೀತಿಯ ಕಾಯುತ್ತ ಕಾಯುತ್ತ
ಬೆಳಗು ಇರುಳಾಗಿತ್ತು
ಬೆಳದಿ೦ಗಳು ಅಮವಾಸ್ಯೆಯಾಗಿತ್ತು
ಸೂರ್ಯ ಉದಯಿಸುವ ಮೊದಲೇ ಗ್ರಹಣ ಬಡಿದಿತ್ತು
ನನ್ನ ಪ್ರೇಮವೆ೦ಬ ಪೂರ್ಣಚ೦ದಿರ
ನಿನ್ನ ಮನದ೦ಗಳದಲ್ಲಿ ಅ೦ಕುರಿಸದಾಗಿತ್ತು

ನಿನಗಾಗಿ

ಆ ರವಿ ಸಿಡಿದು ಉಲ್ಕೆಯಾದರೂ
ಭೂಮಿಯೇ ಸೀಳಿ ಜ್ವಾಲೆ ಂದರೂ
ಸಾಗರ ಉಕ್ಕಿ ಸುನಾಮಿಯಾದರೂ
ನನ್ನೆದೆ ಬಡಿತ ನಿನ್ನೇ ಮಿಡಿವುದು

ಮಬ್ಬಾದ ಜೀವಕೆ ಮಿಂಚಾಗಿ ಬಂದೆ
ನೊವಿರೋ ಮೊಗದಲಿ ನಗುವನೆ ತಂದೆ
ಅರಳುವ ಸುಮಕೆ ನೆರಳಾಗಿ ನಿಂದೆ
ಸೊಗಸಾದ ಬದುಕಿಗೆ ಮುನ್ನುಡಿ ಬರೆದೆ

ಮನದಾಳದ ಆಸೆ ಅಳಿಯದೆ ಉಳಿಯಲಿ
ಅವಿತಿಟ್ಟ ಬಯಕೆಯು ಗರಿ ಬಿಚ್ಚಿ ಹಾರಲಿ
ಏಳೇಳು ಜನುಮಕು ನೀ ನನ್ನವಳಾಗಲಿ
ಜೀವಕೆ ಜೀವ ಬೆರೆತು ಸಾಗಲಿ
ಅಪರೂಪದೀ ಜನ್ಮ ಬಂಗಾರವಾಗಲಿ

ಮೌನ

ನಾನೆ ಕಟ್ಟಿದ ಮೋಹದ ಅರಮನೆಯಲ್ಲಿ
ಈಗ ನಾನೆ ಪ್ರ್‍ಏಮ ಖೈದಿ;
ಒಲುಮೆಯಲಿ ಜೊತೆಯಾಗಿದ್ದ
ಪ್ರೀತಿಯ ಅರಗಿಳಿಯು ಹಾರಿ ಹೋದ ಮೇಲೆ,
ನೀರವ ಸ್ಮಶಾನ ಮೌನ;
ಈಗ ನಾನು ಒಬ್ಬ೦ಟಿ, ಮೋಹದ ಪ೦ಜರದಲ್ಲಿ;
ಮನಸು ತ೦ತಿ ಹರಿದ ವೀಣೆ;
ಸೂತ್ರವಿಲ್ಲದ ಗಾಳೀಪಟ;

ಕೊಲ್ಲುತಿಹುದು ಮನಸ ಈ ನೆನಪುಗಳು
ಮತ್ತೆ ಮತ್ತೆ ಚೂರಿ ಹಾಕಿ ಇರಿದ೦ತೆ;
ಜೋಡಿ ಹಕ್ಕಿಗಳ ಕಲರವ ಕೂಡ
ಅಣಕಿಸುವ೦ತಿದೆ ಈ ವೇದನೆಯ;

Total Kannada

Kannada Language

Places in Karnataka

http://www.mysore.nic.in/

http://www.starofmysore.com/

http://www.agumbe.com/

http://www.mysorepalace.org/

http://www.mysoredasara.com/

http://www.mylibnet.org/

http://www.mysoresamachar.com/

http://www.bangaloreyellowpages.com

http://www.koramangala.com/

http://www.bwssb.org/

http://www.bangalore.travelmall.com/

http://www.harappa.com/post/bang.html

http://www.bangaloreonlineflorists.com

http://www.naveenmysore.com/mysore/mysore.htm

http://www.bangalorebio.com/

http://linux-bangalore.org/

http://www.educationbangalore.com/

http://www.mgl.stpi.in/index.html

http://www.udupipages.com/travel/mlore.html

http://www.mangalorecity.com/mlore.htm

http://www.mangalore-karnataka.com/

http://www.bangaloreit.com

http://www.bangaloreonline.com

http://www.apnabangalore.com

http://www.bangalorebest.com

http://www.bangalorenet.com

http://www.bijapur.net/

http://www.mangalore.com/

http://www.mangaloreuniversity.ac..in/

http://mangalorecustoms.kar.nic.in/

http://www.mangaloredelicacy.netfirms.com/

http://www.explocity.com/bangalore.asp

http://www.karnataka.com

http://www.bangalore.com

http://www.children-of-bangalore.com

http://www.bangaloretelecom.com/

http://bangalore.gnu.org.in/

http://www.cyberbangalore.com/

http://www.mybangalore.com/

http://www.bangalore-online.com/

http://www.kodava.com/

http://www.yakshagana.com/

http://www.uni-mysore.ac.in/

http://www.geocities.com/Athens/2960/

http://www.hubli.bsnl.co.in/

http://www.clickhubli.com/

http://www.bangalorelabs.com/

http://www.mysore.net/history.htm

http://www.dharwad.com/

http://www.kamat.com/kalranga/mysore/jewelry.htm

http://www.iskconbangalore.org/2.asp

Tour De Karnataka

Kannada Websites

Kannada Newspapers